ಬೇಡರೆಡ್ಡಿಹಳ್ಳಿ ಗ್ರಾಪಂ ನಲ್ಲಿ 2024-25 ನೇ ಸಾಲಿನಲ್ಲಿ ನಡೆದ ಗೋಲ್ ಮಾಲ್ ತನಿಖೆ ನಡೆಸಲು ಸತ್ಯಾಶೋಧನಾ ಸಮಿತಿ ರಚಿಸುವಂತೆ ನಗರದ ತಾಪಂ ಮುಂದೆ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿದರು. ಗ್ರಾಪಂ ನ 15 ನೇ ಹಣಕಾಸು ಯೋಜನೆಯಲ್ಲಿ ನಕಲಿ ಬಿಲ್ ಸೃಷ್ಠಿಸಿ ಲಕ್ಷಾಂತರ ಗೋಲ್ ಮಾಲ್ ಮಾಡಿ ಜನರ ತೆರಿಗೆ ವಂಚಿಸಿರುವ ಬಗ್ಗೆ ತನಿಖೆ ಮಾಡಲು ಸತ್ಯಾಶೋಧನಾ ಸಮಿತಿ ರಚನೆ ಮಾಡಬೇಕು. ಅಲ್ಲಿ ತನಕ ಹಣ ಡ್ರಾ ಮಾಡದಂತೆ ಗ್ರಾಪಂ ಬ್ಯಾಂಕ್ ಖಾತೆ ಲಾಕ್ ಮಾಡಬೇಕು ಎಂದು ಒತ್ತಾಯ ಮಾಡಿದರು.