ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಬಾರದು ಎಂದು ಆಗ್ರಹಿಸಿ 4 ಗ್ರಾ. ಪಂ ಗಳ ಕೆಲ ಗ್ರಾಮಸ್ಥರು ಮದ್ದೂರು ತಾಲ್ಲೂಕು ಕಚೇರಿಯ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಖಂಡಿಸಿದ ಘಟನೆ ನಡೆಯಿತು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿಯ ಕೆಲ ಗ್ರಾಮಸ್ಥರು ರೈತ ಹೋರಾಟಗಾರರಾದ ಸುನಂದಾ ಜಯರಾಮ್ ರವರ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಈ ವೇಳೆ ರೈತ ನಾಯಕಿ ಸುನಂದಾ ಜಯರಾಮ್ ರವರು ಗುರುವಾರ ಸಂಜೆ 4 ಗಂಟೆಯಲ್ಲಿ ಮಾತನಾಡಿ, ಈ ಹಿಂದೆ ನಾಲ್ಕು ಗ್ರಾ.ಪಂ ಗಳ ಗ್ರಾಮಗಳನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಬಾರದು ಎಂದು ಹಲವಾರು ಬಾರಿ ಪಟ್ಟಣದ ತಾಲ್ಲೂಕು ಕಚೇರಿ ಸೇರಿದಂತೆ ಸಂಬಂಧಪಟ್ಟ ಸ್ಥಳೀಯ ಗ್ರಾ. ಪಂ ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿ ಸೇರ್ಪಡೆಗೊಂಡರ