ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶೀಘ್ರ ಆರಂಭಿಸಲಾಗುವುದು ಎಂದು ಅಖಿಲ ಭಾರತ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕೋಲಿ ಹಣಕುಣಿ ಅವರು ತಿಳಿಸಿದರು. ರಾಜ್ಯಾಧ್ಯಕ್ಷ ದತ್ತಾತ್ರೇಯ ರೆಡ್ಡಿ ಮುದಿರಾಜ ಅವರ ಆದೇಶದ ಮೇರೆಗೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಶೀಘ್ರ ಪದಾಧಿಕಾರಿಗಳ ನೇಮಕ ಕೈಗೊಳ್ಳುವುದಾಗಿ ಅಶೋಕ್ ಕೋಲಿ ಅವರು ಶನಿವಾರ ರಾತ್ರಿ 8.30 ಕ್ಕೆ ತಿಳಿಸಿದರು.