ಚಾಮರಾಜನಗರ, ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ಚರ್ಮ ಗಂಟು ರೋಗದ ಪರಿಣಾಮ ಮತ್ತೆರಡು ಕರುಗಳಲ್ಲಿ ರೋಗದ ಲಕ್ಷಣಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಭಯದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ರೈತ ಮುನಿಸಿದ್ದ ಶೆಟ್ಟಿ ರವರಿಗೆ ಸೇರಿದ ಮೂರು ಕರುಗಳು ಈಗಾಗಲೇ ಈ ರೋಗಕ್ಕೆ ಬಲಿಯಾಗಿವೆ. ಇದೀಗ ಮತ್ತೆರಡು ಕರುಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ರೋಗ ಸುತ್ತಮುತ್ತಲಿನ ಗ್ರಾಮಗಳಿಗೂ ವ್ಯಾಪಿಸುತ್ತಿರುವ ಸಂಕೇತಗಳು ಕಂಡುಬಂದಿವೆ.ಗಂಟು ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಚರ್ಮ ರೋಗ ದಿನೇದಿನೆಗೆ ಉಲ್ಬಣವಾಗುತ್ತಿದ್ದು, ಸ್ಥಳೀಯ ರೈತರು ಮತ್ತು ಪಶುಪಾಲಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.