ಇಂದು ಕೊಪ್ಪಳ ಮತಕ್ಷೇತ್ರದ ಹ್ಯಾಟಿ ಗ್ರಾಮದಲ್ಲಿ ಹ್ಯಾಟಿ ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಂಘದ ವತಿಯಿಂದ ನಡೆದ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಡಿಯಲ್ಲಿ ಹಾಗೂ ಸಂಘದ ಕಟ್ಟಡ ನಿಧಿ ಹಾಗೂ ಹಾಲು ಉತ್ಪಾದಕರ ಬೋನಸ್ ನಿಂದ ನೂತನವಾಗಿ ನಿರ್ಮಾಣಗೊಂಡಿರುವ 'ಕಾಮಧೇನು ಸಭಾಂಗಣ ' ದ ಉದ್ಘಾಟನೆಯ ಕಾರ್ಯಕ್ರಮ ಇಂದು ನಡೆಯಿತು. ಸೆಪ್ಟೆಂಬರ್07 ರಂದು ಮಧ್ಯಾಹ್ನ 2-30 ಗಂಟೆಗೆ ಕೊಪ್ಪಳ ಶಾಸಕರು ಹಾಗೂ ರಾಬಕೋವಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಸಂದರ್ಭದಲ್ಲಿ ಹಲವರು ಉಪಸ್ಥಿತರಿದ್ದರು