ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಭಾವೈಕ್ಯತೆಯ ಈದ್ ಮಿಲಾದ್ ಹಬ್ಬವನ್ನು ಉತ್ಸವಮಯವಾಗಿ ಆಚರಿಸಲಾಯಿತು.ಹಬ್ಬದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶೋಭಾ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಮಕ್ಕಳು, ಯುವಕರು, ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ, ಧಾರ್ಮಿಕ ಭಜನೆಗಳು ಹಾಗೂ ಘೋಷಣೆಗಳ ಮೂಲಕ ಸಂಭ್ರಮ ಹೆಚ್ಚಿಸಿದರು.ಸೆಪ್ಟಂಬರ್ 5, ಶುಕ್ರವಾರ ಮಧ್ಯಾಹ್ನ 1ಗಂಟೆಗೆ ವಿಶೇಷವಾಗಿ, ವಾಲ್ಮೀಕಿ ಸರ್ಕಲ್ ಬಳಿ ಮೆರವಣಿಗೆಯನ್ನು ನಿಲ್ಲಿಸಿ, ವಾಲ್ಮೀಕಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಹೀಗೆ ಧಾರ್ಮಿಕ ಹಬ್ಬದ ಜೊತೆಗೆ ಸಾಮಾಜಿಕ ಭಾವೈಕ್ಯತೆಯ ಸಂದೇಶವನ್ನೂ ಗ್ರಾಮಸ್ಥರು ಹಬ್ಬದ ಮೂಲಕ ಮೆರೆದಿದ್ದಾರೆ.