ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಕೋಟ್೯ ಆವರಣದಲ್ಲಿ ಮಹಿಳೆ ಸೇರಿ ಇಬ್ಬರ ಮೇಲೆ ನಾಯಿ ದಾಳಿ ನಡೆಸಿ ತೀವ್ರ ಸ್ವರೂಪದ ಗಾಯ ಮಾಡಿದೆ. ಶನಿವಾರ ಮಧ್ಯಾಹ್ನ ಸುಮಾರು 3 ರ ಸಮಯದಲ್ಲಿ ಈ ಘಟನೆ ನಡೆದಿದೆ. ಕೋರ್ಟ್ ಆವರಣದಲ್ಲಿನ ಶೌಚಾಲಯ ಕ್ಕೆ ಹೋಗಿ ಹೊರ ಬಂದಾಗ ನಾಯಿ ಅಟ್ಯಾಕ್ ಮಾಡಿದೆ. ಇದರಿಂದ ತಿಪಟೂರು ತಾಲೂಕಿನ ಬೀರಸಂದ್ರ ಗ್ರಾಮದ 35 ವರ್ಷದ ಗಂಗಾಭವಾನಿ ಎಂಬ ಮಹಿಳೆ ತೀವ್ರ ಗಾಯಾಗೊಂಡಿದ್ದಾರೆ. ಗಂಗಾಭಾವನಿಯವರು,ಸಾಂಸಾರಿಕ ವ್ಯಾಜ್ಯ ಹಿನ್ನೆಲೆ ನ್ಯಾಯಾಲಯಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ನಾಯಿಯಿಂದ ಅಕ್ಕನನ್ನು ರಕ್ಷಿಸಲು ಬಂದ ತಮ್ಮನ ಮೇಲೂ ಶ್ವಾನದಾಳಿ ನಡೆಸಿದೆ.