Mspl bspl ಪರ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ ನೀಡಿರುವ ಹೇಳಿಕೆಯನ್ನು ಖಂಡಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಜಂಟಿ ಕ್ರೀಯಾ ಸಮೀತಿಯ ನಾಯಕರು ಸಚಿವ ಎಂ ಬಿ. ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆಗಸ್ಟ್ 23 ರಂದು ಮಧ್ಯಾಹ್ನ 1-00. ಗಂಟೆಗೆ ಎಂ ಎಸ್ ಪಿ ಎಲ್ ನ ಬಲ್ಡೊಟಾ ತೋಲಗಿಸಿ ಕೊಪ್ಪಳ ಉಳಿಸಿ ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಯಲ್ಲಿ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಬಸವರಾಜ ಶೀಲವಂತರ ಮತ್ತು ಎಸ್ ಎ.ಗಫರ್ ಸೇರಿದಂತೆ ಹಲವರು ಭಾಗಿಯಾಗಿದ್ದರು