ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಅನ್ಯಕೋಮಿನಿಂದ ಕಲ್ಲುತೂರಾಟ ನಡೆಸಿದ್ದನ್ನು ವಿರೋಧಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ನೀಡಿದ್ದ ಭಾರತೀನಗರ ಬಂದ್ ಯಶಸ್ಸಿಗೊಂಡಿತು. ಹಿಂದೂಪರ ಸಂಘಟನೆಗಳು ಭಾನುವಾರ ನಡೆದ ಕೋಮು ಸಂಘರ್ಷಣೆ ಹಿನ್ನೆಲೆಯಲ್ಲಿ ಕರೆ ನೀಡಿದ್ದ ಬಂದ್ಗೆ ಭಾರತೀನಗರದಲ್ಲಿ ಬೆಳಿಗ್ಗೆಯಿಂದ ಸಂಜೆ 6 ಗಂಟೆಯ ವರೆವಿಗೂ ಮೆಡಿಕಲ್ ಸ್ಟೋರ್ ಹೊರತು ಪಡಿಸಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಬಂದ್ ಮಾಡಿ ಯಶಸ್ವಿಗೊಳಿಸಿದರು. ಬೂದಿ ಮುಚ್ಚಿದ ಕೆಂಡದಂತಿರುವ ಹಿನ್ನೆಲೆಯಲ್ಲಿ ಮತ್ತೆ ಯಾವುದೆ ಉದ್ವಿಗ್ನ ಸ್ಥಿತಿ ಉಂಟಾಗದಂತೆ ನೋಡಿಕೊಳ್ಳಲು ಪೊಲೀಸರಿಂದ