ಹಾಸನದ ಮೊಸಳೆ ಹೊಸಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ನಡೆದ ಕ್ಯಾಂಟರ್ ದುರಂತದಲ್ಲಿ. ಚಿಕ್ಕಮಗಳೂರಿನ ಮಣ್ಣಿನ ಹಳ್ಳಿ ಗ್ರಾಮದ 19 ವರ್ಷದ ಸುರೇಶ್ ಮೃತಪಟ್ಟಿದ್ದು, ಎಂಎಲ್ಸಿ ಸಿ.ಟಿ ರವಿ ಸುರೇಶ್ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು. ಮೃತ ಸುರೇಶ್ ಹಾಸನದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು ಡಿಜೆ ನೋಡಲು ಹೋಗಿದ್ದ ವೇಳೆ ಘಟನೆ ನಡೆದಿದೆ.