ಊಟ ಮಾಡುವ ವೇಳೆ ಗಂಟಲಿಗೆ ಅನ್ನ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬಿಣಗಾದ ಮಾಳಸಾವಾಡದಲ್ಲಿ ಸಂಭವಿಸಿದೆ. ಈ ಬಗ್ಗೆ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ರವಿವಾರ ಸಂಜೆ 7ಕ್ಕೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಅಮಿತ ಮಾಳಸೆಕರ್ (38) ಅವರು ಬಿಣಗಾದ ಮಾಳಸವಾಡದ ವಾಸಿ. ಕಾರು ಚಾಲಕರಾಗಿ ಜೀವನ ನಡೆಸುತ್ತಿದ್ದ ಅವರು ಮದ್ಯ ವ್ಯಸನಿಯಾಗಿದ್ದರು. ಮದ್ಯ ಬಿಡಿಲು ಚಿಕಿತ್ಸೆ ಸಹ ನೀಡಲಾಗುತ್ತಿತ್ತು. ಈ ನಡುವೆ ಅಮಿತ್ ಮನೆಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಅನ್ನ ಗಂಟಲಿಗೆ ಸಿಲುಕಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಮಿತ್ ಮೃತಟ್ಟಿದ್ದಾರೆ. ತನಿಕೆ ಮುಂದುವರಿದಿದೆ.