ವಿಜಯಪುರ ನಗರದ ಸಮಗಾರ ಓಣಿಯ ಶ್ರೀ ಶಿವಶರಣ ಹರಳಯ್ಯ ಗಜಾನನ ಮಿತ್ರ ಮಂಡಳಿಯ ವಿಜಯಪುರ ಭೂಪತಿ ಶ್ರೀ ಗಜಾನನ ಭವ್ಯ ಮೂರ್ತಿ ಮೆರವಣಿಗೆಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಚಾಲನೆ ನೀಡಿದರು. ಇದಕ್ಕೂ ಮೊದಲು ವಿಘ್ನ ನಿವಾರಕ ವಿಘ್ನೇಶ್ವರನಿಗೆ ಪೂಜೆ ಸಲ್ಲಿಸಿ, ನಾಡಿಗೆ ಒಳಿತಾಗಲೆಂದು ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವು ಜನ ಮುಖಂಡರು ಉಪಸ್ಥಿತರಿದ್ದರು...