ಶಿರಸಿ ತಾಲೂಕಿನ ಬೆಣ್ಣೆ ಹೊಳೆ ಜಲಪಾತದಲ್ಲಿ ಜಾರಿ ಬಿದ್ದಿದ್ದ ಅರಣ್ಯ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವನನ್ನು ರಕ್ಷಿಸಲಾಗಿದೆ. ಇನ್ನೊಬ್ಬ ನಾಪತ್ತೆಯಾಗಿರುವ ಘಟನೆ ರವಿವಾರ ಮಧ್ಯಾಹ್ನ 2.50ರ ಸುಮಾರು ನಡೆದಿದೆ. ಶ್ರೀನಿವಾಸ ಎಂಬುವವರನ್ನು ರಕ್ಷಿಸಲಾಗಿದ್ದು, ರಾಹುಲ್ ಪತ್ತೆಗಾಗಿ ಶೋಧ ಕಾರ್ಯ ನಡೆದಿದೆ. ಮಾಹಿತಿಯಂತೆ, ಜಲಪಾತದ ಮೇಲೆ ಕಾಲು ತೊಳೆಯಲು ಹೋಗಿದ್ದಾಗ ಶ್ರೀನಿವಾಸ ಜಾರಿದ್ದಾರೆ. ಅವರನ್ನು ರಕ್ಷಿಸಲು ಹೋಗಿದ್ದ ರಾಹುಲ್ ಕೂಡ ಜಾರಿಬಿದ್ದು ಕಾಣೆಯಾಗಿದ್ದಾರೆ. ಕಲ್ಲನ್ನು ಹಿಡಿದುಕೊಂಡಿದ್ದ ಶ್ರೀನಿವಾಸ ಅವರನ್ನು ಸ್ನೇಹಿತರು ಮತ್ತು ಗ್ರಾಮಸ್ಥರು ಹಗ್ಗದ ಸಹಾಯದಿಂದ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ರಾಹುಲ್ ಪತ್ತೆಯಾಗಿಲ್ಲ, ಅವರ ಶೋಧ ಕಾರ್ಯ ತೀವ್ರಗೊಂಡಿದೆ.