ಚಿಕ್ಕಬಳ್ಳಾಪುರ ನಗರದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಅಮ್ಮ ಎಜುಕೇಶನಲ್ ಡೆವಲಪ್ಮೆಂಟ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರವನ್ನು ಶುಕ್ರವಾರ ಆಯೋಜನೆ ಮಾಡಲಾಗಿದೆ.ಇದರ ಭಾಗವಾಗಿ ವೇದಿಕೆ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಬಿಜೆಪಿ ಹಿರಿಯ ಮುಖಂಡ ಸಂದೀಪ್ ರೆಡ್ಡಿಯವರು ಮಾತನಾಡಿ ನಾವು ಗಣ್ಯರನ್ನು ಪೂಜಿಸುವ ಬದಲು, ಅವರಲ್ಲಿರುವ ಉತ್ತಮ ಗುಣಗಳನ್ನ ಪಾಲಿಸಬೇಕು ಎಂದು ತಿಳಿಸಿದರು.