ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಾಲಯ ಭೂಮಿ ವಿವಾದ ಬಗೆಹರಿಸಬೇಕಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ್ ಹಾಲಪ್ಪ ಹೇಳಿದರು. ಬುಧವಾರ ಬೆಳಿಗ್ಗೆ 11.30 ರ ಸಮಯದಲ್ಲಿ ತುಮಕೂರಿನ ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ರಥದ ಶೆಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತಾಡಿದರು.ದೇವಾಲಯಕ್ಕೆ ಭದ್ರತಾ ಸಿಬ್ಬಂದಿ ನೇಮಕವಾಗಬೇಕಿದೆ. ಗೋಪುರ ನವೀಕರಣ, ಹಾಗೆಯೇ ಆರ್ಯವೈಶ್ಯ ಸಂಘ ಹಾಗೂ ಖಾಸಗಿ ವ್ಯಕ್ತಿಗೆ ತಲಾ ನಾಲ್ಕು ಗುಂಟೆ ಜಮೀನು ಮಂಜೂರಾಗಿರುವುದನ್ನು ಮತ್ತೆ ಮರಳಿ ಪಡೆಯಲು ಕ್ರಮಕೈಗೊಳ್ಳಬೇಕಿದೆ ಎಂದು ತಿಳಿಸಿದರು. ಈ ವೇಳೆ ತಹಶೀಲ್ದಾರ್ ರಾಜೇಶ್ವರಿ ಸಹ ಮಾತನಾಡಿದರು.