ನಗರದ ನ್ಯಾಯಾಲಯದಲ್ಲಿ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.ನ್ಯಾಯಮೂರ್ತಿ ಗಣೇಶ್ ಮಾತನಾಡಿ, ಈ ಬೃಹತ್ ಲೋಕ್ ಅದಾಲತ್ ಕಾರ್ಯಕ್ರಮ ದಲ್ಲಿ ಮೂರು ನ್ಯಾಯಾಲಯಗಳಲ್ಲಿ ಮೂರು ನ್ಯಾಯಿಕ ಪೀಠಗಳನ್ನು ಸ್ಥಾಪನೆ ಮಾಡಿ, ಸಂಧಾನಕಾರರು ಮತ್ತು ವಕೀಲರೊಂದಿಗೆ ಸೇರಿ ರಾಜಿ ಮಾಡುವ ಪ್ರಕ್ರಿಯೆ ಮಾಡಲಾಗಿರುತ್ತದೆ, ಒಟ್ಟು 1850 ಪ್ರಕರಣಗಳನ್ನು ರಾಜಿ ಸಂಧಾನ ಮಾಡಲಾಗಿರುತ್ತದೆ. ಹಾಗೂ ಚೆಕ್ ಬೌನ್ಸ್ ಮತ್ತು ವಿಭಾಗ ಮಾಡಿಕೊಳ್ಳುವ ಪ್ರಕರಣಗಳು ಸೇರಿದಂತೆ ಒಟ್ಟು ಒಂದು ಕೋಟಿ ಮೂವತ್ತು ಲಕ್ಷ ಹಣದ ವ್ಯವಹಾರ ನಡೆದಿರುತ್ತದೆ, ಹಾಗೂ ಹಿಂದಿನ ಲೋಕ್ ಅದಾಲತ್ ನ್ನು ಹೋಲಿಸಿಕೊಂಡರೆ ಈ ಬಾರಿ ಹೆಚ್ಚು ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಗಿರುವುದು ಸಂತಸ ತಂದಿ