ಪಟ್ಟಣದ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬುಧವಾರ ಮಧ್ಯಾಹ್ನ 11:30ಕ್ಕೆ ವಿಶೇಷ ಪೂಜೆ ನೆರವೇರಿತು. ಧಾರವಾಡದ ಪಂಡಿತ್ ಸಂತೋಷ್ ಭಟ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಭಿಷೇಕ ಅಲಂಕಾರ ಪೂಜೆ ನೆರವೇರಿತು ಬಳಿಕ ಹವನ ಕಾರ್ಯಕ್ರಮ ಕೂಡ ಜರುಗಿತು. ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ವೀರೇಶ್ ಎಂ ಜಾಜಿ ಅಧ್ಯಕ್ಷ ವಿನೋದಕುಮಾರ ಪ್ರಧಾನ ಕಾರ್ಯದರ್ಶಿ ವಿನಾಯಕ ರಘೋಜಿ ಸೇರಿದಂತೆ ದೇವಸ್ಥಾನ ಸಮಿತಿ ಇತರೆ ಪದಾಧಿಕಾರಿಗಳು ಇದ್ದರು.