ಧರ್ಮಸ್ಥಳ ಪ್ರಕರಣ ಎನ್ ಐಎಗೆ ವಹಿಸುವ ವಿಚಾರ ಕುರಿತಂತೆ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ದೇಶ-ವಿದೇಶಗಳಿಂದ ಅದಕ್ಕೆ ಹಣ ಬಂದಿದೆ ಅಂತ ಚರ್ಚೆ ಆಗುತ್ತಿದೆ. ಭಾರತದ ದೇಶದ್ರೋಹಿ ಏಜೆನ್ಸಿಗಳ ಕೈವಾಡ ಇದೆ ಎಂದು ಮಾಧ್ಯಮಗಳಲ್ಲಿ ಬರ್ತಿದೆ.ಹಾಗಾಗಿ ಎನ್ ಐ ಎ ತನಿಖೆಗೆ ಕೊಟ್ಟರೆ ನ್ಯಾಯ ಸಿಗುತ್ತೆ ಅನ್ನುವ ವಿಶ್ವಾಸ ನಮಗೆ ಇದೆ ಎಂದು ಕೆ ಎಸ್ ಈಶ್ವರಪ್ಪ ತಿಳಿಸಿದರು.