ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಜನಿಸಿ,ಲಂಡನ್ ನಲ್ಲಿ ವೈದ್ಯರಾಗಿ ತಾಯ್ನಾಡಿನ ಜನತೆಯ ಸಂಕಷ್ಟಕ್ಕೆ ಹೆಗಲು ಕೊಟ್ಟು ಶಾಶ್ವತ ನೀರಾವರಿಯನ್ನು ಒದಗಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದ ಧೀಮಂತ ನಾಯಕ ಡಾ.ಮಧುಸೀತಪ್ಪ ರವರ ಆಶಯವನ್ನು ಈಡೇರಿಸಿದಾಗ ಮಾತ್ರ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್ ಆಂಜನೇಯರೆಡ್ಡಿಯವರು ತಿಳಿಸಿದರು. ಪಟ್ಟಣದಲ್ಲಿ ಭಾನುವಾರ ಡಾ. ಮಧುಸೀತಪ್ಪ ರವರ ಅಂತಿಮ ದರ್ಶನ ಪಡೆದು ನಂತರ ಮಾತನಾಡಿ,ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿಯನ್ನು ಒದಗಿಸಲು ಹಲವಾರು ಮಹನೀಯರು ಹೋರಾಟಗಳನ್ನು ನಡೆಸಿದ್ದಾರೆ. ದಿ. ಮಾಜಿ ಶಾಸಕ ಜಿ.ವಿ ಶ್ರೀರಾಮ ರೆಡ್ಡಿರವರ ಹಾದಿಯಾಗಿ ಸುಮಾರು ಮೂರು ದಶಕಗಳ ಕಾಲದಿಂದ ಹೋರಾಟಗಳನ್ನು ಮಾಡಲಾಗುತ್ತಿದೆ ಎಂದರು.