ಕಟ್ಟು ಮಸ್ತಾದ ದೇಹ,ಜೊತೆಗೆ ಸುರದ್ರೂಪಿ ಸುಂದರ ಯುವಕ,ಹೆಸರು ಸುರೇಶ್ ಕುಮಾರ್. ಕೋಲಾರದ ಗಾಂಧಿನಗರದ ಚಲಪತಿ ಮುನಿಯಮ್ಮ ಪುತ್ರ.ತಮ್ಮ ಸಾಧನೆಯ ಹಾದಿಯಲ್ಲಿ ರಾಜ್ಯ ಅಂತರಾಜ್ಯ ಮತ್ತು ವಿದೇಶದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಮೇರಿಕಾಕ್ಕೂ ತೆರಳಿದ್ದರು.ಐದು ವರ್ಷದ ಹಿಂದೆ ಅಮೇರಿಕಾದ ಫ್ಲೋರಿಡಾದಲ್ಲಿ ನೆಲಸಿದ್ದರು.ಅಲ್ಲಿ ಜಿಂ ಟ್ರೈನರ್ ಫಿಸಿಯೋಥೆರಪಿಸ್ಡ್ ಮಾಡೆಲ್ ಆಗಿ ತೊಡಗಿಸಿಕೊಂಡು ಬದುಕಿದ್ದರು.ಭಾನುವಾರ ಅಪಘಾತದಲ್ಲಿ ಮರತಪಟ್ಟಿದ್ದು ನನ್ನ ಮಗ ಬಾಡಿ ಬಿಲ್ಡರ್ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದ ದಯವಿಟ್ಟು ಅಮೇರಿಕಾದಿಂದ ಕೋಲಾರಕ್ಕೆ ಮೃತದೇಹನ್ನು ತರುವ ವ್ಯವಸ್ಥೆ ಮಾಡಿಸಿ ಎಂದು ಮಂಗಳವಾರ ಸುರೇಶ್ ಬಾಬು ತಾಯಿ ಮನವಿ ಮಾಡಿದ್ದಾರೆ