ಕಲಬುರಗಿ : ಕಲಬುರಗಿಯಲ್ಲಿ ವಿಜ್ಞ ನಿವಾರಕ ಗಣೇಶನ ಹಬ್ಬವನ್ನ ಭರ್ಜರಿಯಾಗಿ ಆಚರಿಸಲಾಗುತ್ತಿದ್ದು, ಕೋಟೆ ಮುಂಭಾಗದ ಹಿಂದೂ ಮಹಾ ಗಣಪತಿ ಅತ್ಯಂತ ಆಕರ್ಷಕವಾಗಿದೆ.. ಆ 27 ರಂದು ಮಧ್ಯಾನ 12 ಗಂಟೆಗೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನನ್ನ 21 ದಿನಗಳ ಕಾಲ ಕೂರಿಸಲಾಗ್ತಿದೆ.. ತಿರುಪತಿ ತಿಮ್ಮಪ್ಪನ ದೇಗುಲ ಮಾದರಿಯ ಸೆಟ್ ಹಾಕಲಾಗಿದ್ದು, ಆರಂಭದ ದಿನವಾದ ಇಂದು ಶೃದ್ಧಾ ಭಕ್ತಿಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು..