ಸೀಬಾರ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಬೀಕರ ಅಪಘಾತ ನಡೆದು ಬೈಕ್ ಸವಾರ ಮೃತಪಟ್ಟ ಘಟನೆ ನಡೆದಿದೆ. ಚಿತ್ರದುರ್ಗ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 4 ರ ಸೀಭಾರ ಬಳಿಯ ಬಾಲಮ್ಮ ಪೆಟ್ರೋಲ್ ಬಂಕ್ ಮುಂಬಾಗ ಘಟನೆ ನಡೆದಿದ್ದು ಚಳ್ಳಕೆರೆ ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ಬೈಕ್ ಸವಾರ ಶಿವಕುಮಾರ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಇನ್ನೂ ಮಂಗಳವಾರ ಮಧ್ಯಾಹ್ನ 12.35 ರ ವೇಳೆ ಘಟನೆ ನಡೆದಿದ್ದು ಮೃತ ಬೈಕ್ ಸವಾರ ಶಿವಕುಮಾರ್ ಗಂಬೀರವಾಗಿ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದಾನೆ