ಮದ್ದೂರು ತಾಲ್ಲೂಕು ಭಾರತೀನಗರದ ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಮಧುಜಿಮಾದೇಗೌಡ ಉದ್ಘಾಟಿಸಿದರು. ಇದೇ ವೇಳೆ ಮಹಾಜನ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ವಿನೋದಮ್ಮ ಅವರಿಗೆ ಉತ್ತಮ ಅಧ್ಯಾಪಕಿ ಪ್ರಶಸ್ತಿ ನೀಡಿ 10 ಸಾವಿರ ನಗದು ಹಾಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಿ ಗೌರವಿಸಿದರು. ಭಾರತೀ ಸ್ನಾತ್ತಕೋತ್ತರ ವಿಭಾಗದ ಗಣಿಶಾಸ್ತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕುಮುದ ಅವರು ಪಿಎಚ್ಡಿ ಪದವಿ ಅಲಂಕರಿಸಿರುವುದರಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕೌಶಾಲ್ಯಾಭಿವೃದ್ದಿ ಕಾರ್ಯಕ್ರಮ ಅಧ್ಯಾಪಕ ಆರ್.ಎ.ಚೇತನ್ಕುಮಾರ್ ಅವರು ಗುರುಪಥ ಎಂಬ ವಿಷಯದ ಬ