ಚಾಮರಾಜನಗರದಲ್ಲಿ ಹಿಂದೂಪರ ಸಂಘಟನೆಗಳು ಈ ಬಾರಿ ಬ್ರಹ್ಮೋಸ್ ಮೇಲೆ ಕುಳಿತಿರುವ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಇದಕ್ಕೂ ಮುನ್ನ ಆದಿಶಕ್ತಿ ದೇವಸ್ಥಾನದಿಂದ ಮಂಗಳವಾದ್ಯದಲ್ಲಿ ಗಣೇಶಮೂರ್ತಿಯನ್ನು ಮೆರವಣಿಗೆಯಲ್ಲಿ ತರಲಾಯಿತು. ಹೆಚ್ಚು ಪೊಲೀಸ್ ಬಂದೋಬಸ್ತ್ ಇರುವುದರಿಂದ ಇದು ಪೊಲೀಸ್ ಗಣಪತಿ ಅಂಥಲೂ, ದೊಡ್ಡ ಗಣಪತಿ, ಆರ್‌ಎಸ್ಎಸ್ ಗಣಪತಿ ಅಂಥಲೂ ಈ ಗಣೇಶ ಜನಪ್ರಿಯತೆ ಗಳಿಸಿದೆ. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಪ್ರತಿಷ್ಠಾಪನೆ ವೇಳೆ ಹಾಜರಿದ್ದು, ಪೂಜೆಯಲ್ಲಿ ಪಾಲ್ಗೊಂಡು ಮೊದಲ ಪೂಜೆ ಮಾಡಿ ಗಮನ ಸೆಳೆದರು.