ಹನೂರು: ತಾಲೂಕಿನ ಮಂಚಾಪುರ ಗ್ರಾಮದ ರೈತ ಪೆರುಮಾಳ್ ರವರ ಜಮೀನಿಗೆ ಕಾಡು ಹಂದಿಗಳ ದಾಳಿ ಸಂಭವಿಸಿ, ನಾಲ್ಕು ಏಕರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆ ಸಂಪೂರ್ಣ ನಾಶವಾಗಿದೆ. ಈ ಹಾನಿಯಿಂದ ಲಕ್ಷಾಂತರ ರೂಪಾಯಿ ನಷ್ಟ ಎದುರಿಸಿರುವ ಪೆರುಮಾಳ್ ಆತ್ಮಹತ್ಯೆಗೆ ಎಚ್ಚರಿಕೆ ನೀಡಿದ ವಿಚಾರ 'ಪಬ್ಲಿಕ್ ಆ್ಯಪ್' ಮಾಧ್ಯಮದಲ್ಲಿ ವರದಿ ಆದ ಬಳಿಕ, ಸಂಬಂಧಪಟ್ಟ ಇಲಾಖೆ ತಕ್ಷಣ ಕ್ರಮಕ್ಕೆ ಮುಂದಾಗಿದೆ. ಪೆರುಮಾಳ್ ಅವರು ತಮ್ಮ ಜಮೀನಿನಲ್ಲಿ ಸಾಲ ಪಡೆದು ಜೋಳದ ಬಿತ್ತನೆ ಮಾಡಿದ್ದರು. ಬೆಳೆ ಈಗ ಕಟಾವು ಹಂತಕ್ಕೆ ತಲುಪಿದ್ದಾಗಲೇ, ಕಾಡು ಹಂದಿಗಳ ಹಿಂಡು ಜಮೀನಿಗೆ ನುಗ್ಗಿ ಜೋಳದ ಫಸಲನ್ನು ತಿಂದು, ತುಳಿದು ಸಂಪೂರ್ಣ ನಾಶಮಾಡಿತ್ತು