Download Now Banner

This browser does not support the video element.

ಮಳವಳ್ಳಿ: ಮಂಡ್ಯ ನಗರದಲ್ಲಿ ದಲಿತ ಮುಖಂಡ ವೆಂಕಟ ಗಿರಿಯಯ್ಯ ಸುದ್ದಿಗೋಷ್ಠಿ, ಎಸ್ಇಪಿ ಟಿಎಸ್ಪಿ ಹಣ ಗ್ಯಾರೆಂಟಿಗೆ ಬಳಕೆಗೆ ತೀವ್ರ ವಿರೋಧ

Malavalli, Mandya | Aug 29, 2025
ಮಂಡ್ಯ: ಗ್ಯಾರೆಂಟಿ ಯೋಜನೆಗಳ ನೆಪದಲ್ಲಿ ಎಸ್‌ಇಪಿ‌, ಟಿಎಸ್ಪಿ ಅನುದಾನದಲ್ಲಿ 13 ಸಾವಿರ ಕೋಟಿ ರೂಗಳನ್ನು ಬಳಕೆ ಮಾಡಲು ರಾಜ್ಯದ ಕಾಂಗ್ರೆಸ್ ಸರಕಾರ ಮುಂದಾಗಿದ್ದು ಆ ಮೂಲಕ ಪರಿಶಿಷ್ಟ ಜಾತಿ/ ಪಂಗಡಗಳ ಅಭಿವೃದ್ಧಿ ವಿರೋಧಿ ಯಾಗಿರುವ ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ಕರ್ನಾ ಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆಗ್ರಹಿಸಿದರು. ಮಂಡ್ಯ ನಗರದಲ್ಲಿ ಶುಕ್ರವಾರ ಸಾಯಂಕಾಲ 4 ಗಂಟೆ ಸಮಯ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿದ ಅವರು, ರಾಜ್ಯವನ್ನಾಳಿದ ಎಲ್ಲಾ ಪಕ್ಷಗಳ ಸರಕಾರಗಳು ಪರಿಶಿಷ್ಠರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಇತರ ಯೋಜನೆಗಳಿಗೆ ಬಳಸಿಕೊಂಡು ದಲಿತರಿಗೆ ಅನ್ಯಾಯ ಮಾಡುತ್ತಿವೆ ಎಂದು ಕಿಡಿ ಕಾರಿದರು.
Read More News
T & CPrivacy PolicyContact Us