ಧಾರವಾಡ ನಗರದಲ್ಲಿ ೭ನೇ ದಿನಗಳ ಸಾರ್ವಜನಕ ಗಣಪತಿ ಮೂರ್ತಿಗಳನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ವಿಸರ್ಜನೆ ಮಾಡಲಾಯಿತು. ಮಂಗಳವಾರ ರಾತ್ರಿ 8 ಗಂಟೆಗೆ ಧಾರವಾಡ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಡಿಜೆ ಮೆರವಣಿಗೆಯಲ್ಲಿ ಯುವಕರು ಗಣೇಶನಿಗೆ ಜಯಘೋಷ ಹಾಕಿ ಕುಣಿದು ಕುಪ್ಪಳಿಸಿದರು. ಧಾರವಾಡ ನಗರದ ಗೊಲ್ಲರ ಕಾಲೋನಿ, ಮಾಳಾಪುರ, ಕಾಮನಕಟ್ಟಿ, ಸಪ್ತಾಪುರ, ಕುಮಾರೇಶ್ವರ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು.