ಗೌರಿಬಿದನೂರು ನಗರದ ನದೀದಡ ಆಂಜಿನೇಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ತಾಲೂಕು ಉಚಿತ ಕಾನೂನು ಸೇವೆಗಳ ಸಮಿತಿ, ಆಹಾರ ನಾಗರೀಕ ಸರಬರಾಜು ಹಾಗು ಗ್ರಾಹಕರ ವ್ಯವಹಾರಗಳ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ವಕೀಲರ ಸಂಘ, ಮುಂತಾದವರಿAದ ನಡೆದ ರಾಷ್ಟಿçÃಯ ಪೌಷ್ಠಿಕಾಹಾರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ನ್ಯಾಯಾಧೀಶೆ ಡಿ.ಪುಷ್ಪ ಮಾತನಾಡಿ ಆರೋಗ್ಯಕ್ಕೆ ಹಾನಿಕಾರಕವಾದ ಬರ್ಗರ್, ಪಿಜ್ಜಾ ಮುಂತಾದವುಗಳನ್ನು ಸೇವಿಸ ಬಾರದು, ನಮ್ಮ ಪರಿಸರದಲ್ಲಿ ಬೆಳೆಯುವ ಸೊಪ್ಪುಗಳು,ಬೇಳೇ ಕಾಳುಗಳಲ್ಲಿ ಹೆಚ್ಚು ಪೌಷ್ಠಿಕಾಂಶ ಗಳಿರುತ್ತೆ. ನಾವು ಕಾಲವನ್ನು ಉಳಿಸುವ ನೆಪದಲ್ಲಿ ಜಿಂಕ್ ಫುಡ್ ತರಿಸಿಕೊಂಡು ನಾವು ಸೇವಿಸುವುದಲ್ಲದೇ, ಮಕ್ಕಳಿಗೆ ನೀಡಿ ಅವರ ಆರೋಗ್ಯವನ್ನು ಸಹಾ ಹಾಳು ಮಾಡುತ್ತಿದ್ದೇವೆ