ಚಿತ್ರದುರ್ಗ ನಗರದಲ್ಲಿ ನಾಳೆ ಹಿಂದೂ ಮಹಾಗಣಪತಿ ಬೃಹತ್ ಶೋಭಯಾತ್ರೆ ನಡೆಯಲಿದೆ. ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಡೆಯಲಿರುವ ಶೋಭಯಾತ್ರೆಗೆ ಲಕ್ಷಾಂತರ ಮಂದಿ ಹಿಂದೂ ಪರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ನಾಳೆ ಬೆಳಿಗ್ಗೆ 10 ಗಂಟೆಯಿಂದ ಶೋಭಯಾತ್ರೆ ಆರಂಭವಾಗಲಿದ್ದು , ಐತಿಹಾಸಿಕ ಚಂದ್ರವಳ್ಳಿ ಬಳಿ ಗಣಪತಿ ವಿಸರ್ಜನೆ ನಡೆಸಲಾಗುತ್ತದೆ. ಈ ನಡುವೆ ಹಿಂದೂ ಮಹಾಗಣಪತಿ ಸಮಿತಿ ನಗರವನ್ನ ಮದುವಣ ಗಿತ್ತಿಯಂತೆ ಸಿಂಗಾರ ಮಾಡಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ಮದಕರಿ ನಾಯಕನ ಪುತ್ಥಳಿ ಸೇರಿ ಹಲವು ಮಹನೀಯರು ಪುತ್ಥಳಿಗಳಿಗೆ ಆಕರ್ಷಣಿಯ ಅಲಂಕಾರ ಮಾಡಲಾಗಿದೆ