ಬೆಳಗಾವಿ ಜಿಲ್ಲೆಯಲ್ಲಿ ವಿವಿಧ ತಾಲೂಕಿನಲ್ಲಿ ಪಶ್ಚಿಮ ಘಟ್ಟಗಳಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಿಂದಾಗಿ ಘಟಪ್ರಭಾ ನದಿಯ ಅಬ್ಬರಕ್ಕೆ ಬಡಾವಣೆಗೆ ನುಗ್ಗಿದ್ದ ನೀರು ಹಲವು ಗ್ರಾಮಗಳನ್ನು ಸುತ್ತುವರಿದು ಪ್ರವಾಹದ ಭೀತಿ ಸೃಷ್ಟಿಯಾಗಿತ್ತು ಹಾಗೇಯೆ ಲೋಳಸೂರು ಸೇತುವೆ ಕೂಡಾ ಸಂಪೂರ್ಣ ಮುಳುಗಿದ ಹಿನ್ನಲೆ ಇಂದು ಶುಕ್ರವಾರ 12 ಗಂಟೆ ಸುಮಾರಿಗೆ ಓಪನ್ ಆಗಿದ್ದು ಸಾರ್ವಜನಿಕರ ಅನುಕೂಲಕ್ಕೆ ಅನುವು ಸಿಕ್ಕಂತಾಗಿದೆ ಇದರಿಂದ ಇಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಪರಿಶೀಲನೆ ಬಳಿಕ ಸಂಚಾರಕ್ಕೆ ಅವಕಾಶ ಮಾಡಿಕ್ಕೊಡಲಾಗಿದೆ ಸೇತುವೆಗೆ ಆಗಿರೋ ಹಾನಿ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನ ಕೂಡಾ ಕೈಗೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.