ಸೆಪ್ಟಂಬರ್ 5 ರಂದು (ಈದ್ ಮಿಲಾದ್) ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಜಯಂತಿಯನ್ನು ಅರ್ಥ ಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ. ಹಬ್ಬದ ದಿನ ಯುವಕರು ಡಿಜೆ ಬಳಬಾರದು ಅಂತ ಜಮಾತ್ ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹಬ್ಬದ ದಿನದಂದು ಜನೋಪಯೋಗಿ ಕಾರ್ಯಗಳನ್ನು ಮಾಡಲಿದ್ದೇವೆ. ಡಿಜೆ ಗೆ ಬಳಸುವ ಹಣದಿಂದ ಬಡವರಿಗೆ ಪುಡ್ ಕಿಟ್ ನೀಡಿ ಶಾಂತಿಯ ಸಂದೇಶ ಸಾರಬೇಕು ಅಂತ ಮೌಲಾನಾ ಜಕಾರಿಯಾಸಾಬ್ ತಿಳಿಸಿದರು.