ಸೆವೆನ್ ಮಿನಿಸ್ಟರ್ ಕ್ಚಾಟ್ರಸ್ ನಲ್ಲಿ ಸಚಿವ ಸಂತೋಷ್ ಲಾಡ್ ಅವರು ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಎಸ್ ಐಟಿಗೆ ಸ್ವಾಗತ ಮಾಡಿದ್ದು ಇವರೇ, ಅದಕ್ಕೆ ಯಾಕೆ ಸ್ವಾಗತ ಮಾಡಿದ್ರು ? ರಾತ್ರೋರಾತ್ರಿ ಯಾರೋ ಒಬ್ಬ ಮನುಷ್ಯ ಬರ್ತಾರೆ. ಅದು ಕೋರ್ಟ್ ಗೆ ಹೋಗುತ್ತೆ ತನಿಖೆಗೆ ಬರುತ್ತೆ, ಅವನು ಹೇಳಿದ್ದು ಆಗಿಲ್ಲ ಅದಕ್ಕೆ ಈಗ ಉಲ್ಟಾ ಆಗಿದ್ದಾರೆ ಇವರಿಗೆ ಬೇರೆ ಕೆಲಸ ಏನೂ ಇಲ್ಲ ಅದಕ್ಕೆ ಪ್ರತಿಭಟನೆ ಮಾಡ್ತಿದ್ದಾರೆ ಇದಕ್ಕೆ ಏನಂತ ಹೇಳೋಣ ಎಂದರು.