ರಾಯಚೂರು ಜಿಲ್ಲೆಯ ಜನತಾ ನಿರಂತರವಾಗಿ ಸುರಿದ ಮಳೆಯಿಂದ ದೇವದುರ್ಗ ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರು ಬೆಳೆದ ಜೋಳದ ಬೆಳೆ ಸಂಪೂರ್ಣವಾಗಿ ಕುಳಿತು ಹೋಗಿದ್ದು ರೈತರು ಕಂಗಲಾಗಿದ್ದಾರೆ. ದೇವದುರ್ಗ ತಾಲೂಕಿನ ಮಸರಕಲ್, ಜಿನ್ನಾಪುರ, ಕೋತದೊಡ್ಡಿ, ಗಣೆಕಲ್ ಸೇರಿದಂತೆ ಹಲವು ಗ್ರಾಮಗಳ ರೈತರು ಬೆಳೆದ ಜೋಳ ಮಳೆ ನೀರಿನಲ್ಲಿ ನೆನೆದು ಹಾಳಾಗಿದ್ದು ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಬುಧವಾರ ಮಧ್ಯಾಹ್ನ ಕಂದಾಯ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆಯನ್ನು ನಡೆಸಿದ್ದಾರೆ.