ದಾಂಡೇಲಿ : ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಮರ ಒಂದು ಧರೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ದಾಂಡೇಲಿ ತಾಲೂಕಿನ ಅಂಬಿಕಾನಗರ - ಬೊಮ್ಮನಳ್ಳಿ ರಸ್ತೆಯಲ್ಲಿ ಬುಧವಾರ ಸಂಜೆ 6:30 ಗಂಟೆ ಸುಮಾರಿಗೆ ನಡೆದಿದೆ. ನಡು ರಸ್ತೆಗೆ ಮರ ಉರುಳಿದ ಪರಿಣಾಮವಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಂಬಿಕಾನಗರ ನಗರ ಠಾಣೆಯ ಪಿಎಸ್ಐ ಮಹೇಶ ಮೇಲಗೇರಿ ಹಾಗೂ ಸಿಬ್ಬಂದಿಗಳ ತಂಡ ಮತ್ತು ಅರಣ್ಯ ಇಲಾಖೆಯ ರಾಮಚಂದ್ರ ಮತ್ತು ಶಿವಾಜಿ ಅವರ ತಂಡದ ನೇತೃತ್ವದಲ್ಲಿ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಯಿತು.