ತಾಲೂಕಿನ ಗ್ರಾಮ ಒಂದರಲ್ಲಿನ ಖಾಸಗಿ ಶಾಲೆ ಒಂದರಲ್ಲಿ ವಿದ್ಯಾರ್ಥಿ ಯೋಗಗಳ ಮೇಲೆ ನಡೆದ ಲೈಂಗಿಕ ಕಿರುಕುಳ ಕುರಿತು ಎಸ್ಐಟಿ ತನಿಖೆ ಆಗಬೇಕು ಎಂದು ಶಾಸಕ ಡಾಕ್ಟರ್ ಸಿದ್ದು ಪಾಟೀಲ್ ಸರ್ಕಾರವನ್ನು ಒತ್ತಾಯಿಸಿದರು. ಘಟನೆ ಕುರಿತು ಆರೋಪಿತನ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾದರೆ ಸಾಲದು ಸಮಗ್ರ ತನಿಖೆಗೋಸ್ಕರ ಆಗ್ರಹಿಸಿ, ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಮಧ್ಯಾಹ್ನ 12ಕ್ಕೆ ನಡೆಸಲಾದ ಸುದ್ದಿಗೋಷ್ಠಿ ಮೂಲಕ ಅಗ್ರಹಿಸಿದರು.