ನಗರದ ತೀನ್ ಕಂದಿಲು ಬಳಿ ಐತಿಹಾಸಿಕ ಕಲ್ಲಾನೆಯ ಮೇಲೆ ಶ್ರೀ ಕಲ್ಲಾನೆ ಕೇಂದ್ರೀಯ ಗಜಾನನ ಸಮಿತಿ ಟ್ರಸ್ಟ್ ವತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಒಂಭತ್ತು ದಿನಗಳ ಕಾಲ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೊನೆಯ ದಿನ ವಿಶೇಷವಾಗಿ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ರಾಯಚೂರು ನಗರದ ಜನತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿನಾಯಕನ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯ ಸದಸ್ಯ ಗೌರವ್ ಆಗಸ್ಟ್ 27 ರ ಬುಧವಾರ ಸಂಜೆ 5 ಗಂಟೆಗೆ ಪಬ್ಲಿಕ್ ಆಪ್ ಜೊತೆ ಮಾತನಾಡಿ ತಿಳಿಸಿದರು.