ಬೀದಿ ನಾಯಿ ಕಡಿತಕ್ಕೆ ಒಳಗಾಗಿದ್ದ ಕೆ.ಎಸ್.ಆರ್.ಟಿಸಿ ಚಾಲಕನೋರ್ವ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹಾವೇರಿ ತಾಲೂಕು ಹಾಲಗಿ ಗ್ರಾಮದಲ್ಲಿ ನಡೆದಿದೆ. ಚಂದ್ರಪ್ಪ ದಶರಥ ಸೊರಟೂರ್ (40) ಮೃತ ಚಾಲಕ. ಗ್ರಾಮದ ರಸ್ತೆಯಲ್ಲಿ ಓಡಾಡುವಾಗ ಬೀದಿನಾಯಿ ಕಚ್ಚಿದ ಪರಿಣಾಮ ಗುಣಮುಖ ಆಗದೆ ಹಿನ್ನೆಲೆ ಮೃತಪಟ್ಟಿದ್ದಾನೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ