2025-26ನೇ ಸಾಲಿನ ಬಿಎ,ಬಿಎಸ್‌ಸಿ ಬಿಸಿಎ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮಕ್ಕೆ ಬುಧವಾರ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಎಂ.ವಸಂತ ಕುಮಾರ್ ಎಲ್ ವಿಡಿ ಕಾಲೇಜು ಶೈಕ್ಷಣಿಕ ಅಭಿವೃದ್ಧಿಗಾಗಿ 30 ಲಕ್ಷ ರೂ ಅನುದಾನ ನೀಡುವುದಾಗಿ ಘೋಷಿಸಿದರು. ಅವರು ಮಾತನಾಡಿ, ನಾನು ಈ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತದೆ, ನನ್ನ ಕುಟುಂಬ ಸದಸ್ಯರು ಮತ್ತು ಮಕ್ಕಳು ಸಹ ಈ ಕಾಲೇಜಿನಲ್ಲಿ ಅಧ್ಯಯನ ಮಾಡಿ ಉನ್ನತ ಪದವಿಗಳನ್ನು ಪಡೆದಿದ್ದಾರೆ. ಕಾಲೇಜಿಗೆ ಉತ್ತಮ ಹೆಸರು ಬರಲು ಪರಿಣಾಮಕಾರಿ ಕ್ಯಾಂಪಸ್ ಶಿಸ್ತು ಮತ್ತು ಉತ್ತಮ ಫಲಿತಾಂಶಗಳು ಅತ್ಯಗತ್ಯ. ಇವುಗಳನ್ನು ಅರಿತುಕೊಳ್ಳುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ. ಅವರು ಕೂಡ ಭಕ್ತಿ, ಕಠಿಣ ಪರಿಶ್ರ