ಕಲಬುರಗಿ : ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ರಕ್ಷಣೆ ಗೋರಕ್ಷಕರ ರಕ್ಷಣೆ ಮತಾಂತರ ಕಾಯ್ದೆ ಜಾರಿ ಮಾಡಲು ಕಟ್ಟರ್ ಹಿಂದೂತ್ವವಾದಿ ಶಿವಸೇನೆ ಪಕ್ಷ ಸೇರ್ಪಡೆಯಾಗಿದ್ದು, ಅದರಂತೆ ರಾಜ್ಯದಲ್ಲಿ ಶಿವಸೇನೆ ಕೈ ಬಲಪಡಿಸಲಾಗುತ್ತದೆಂದು ಶಿವಸೇನೆ ಕರ್ನಾಟಕ ನೂತನ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.. ಆ27 ರಂದು ಸಂಜೆ 6 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಶಿವಸೇನೆ ಎನ್‌ಡಿಎ ಮಿತ್ರಪಕ್ಷವಿದ್ದು, ಕರ್ನಾಟಕದಲ್ಲಿ ಬಿಜೆಪಿ ಬಯಿಸಿದ್ರೆ ಅಲೈಯನ್ಸ್ ಮಾಡಿಕೊಳ್ಳಲಾಗುವುದೆಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದ್ದಾರೆ.