ಕೆ.ಆರ್.ಪೇಟೆ ತಾಲೂಕಿನ ಜೊತ್ತನಪುರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಳಕೆಯಿಂದ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ನಾಲ್ವರ ವಿರುದ್ದ ದೂರು ದಾಖಲು ದಾಖಲಾಗಿದೆ. ಗ್ರಾಮದ ಅಭಿ, ನವೀನ, ಹರೀಶ್ ಹಾಗೂ ಚನ್ನಾಪುರದ ರಾಜೇಶ್ ಎಂಬುವವರ ವಿರುದ್ದ ಠಾಣೆಯ ಸಿಪಿಸಿ ನಾಗೇಗೌಡ ನೀಡಿದ ದೂರು ದಾಖಲಿಸಲಾಗಿದೆ ಎಂದು ನಗರದಲ್ಲಿ ಮಂಗಳವಾರ ಎಸ್ಪಿ ಕಚೇರಿ ಮಾಹಿತಿ ನೀಡಿದೆ. ಜೊತ್ತನಪುರದಲ್ಲಿ ಗಣಪತಿ ಪ್ರತಿಷ್ಠಾಪಿಸಿದ ಆಯೋಜಕರು ಸೆ.5ರಂದು ವಿಸರ್ಜನೆಗೆ ಪೊಲೀಸ್ ಅನುಮತಿ ಪಡೆದಿದ್ದರು. ಆದರೆ ಆ.31ರಂದು ಗಣಪತಿ ವಿಸರ್ಜನೆಗೆ ತಯಾರು ಮಾಡಿ ಟಾಟಾ ಮಿನಿ ಗೂಡ್ಸ್ ವಾಹನದಲ್ಲಿ ಸುಮಾರು 5 ಸ್ಪೀಕರ್ ಕಟ್ಟಿಕೊಂಡು ಗ್ರಾಮದಲ್ಲಿ ಮೆರವಣಿಗೆ ಮಾಡುವ ವೇಳೆ ಶಬ್ದಮಾಲಿನ್ಯ ಉಂಟಾಗಿದೆ.