ರಾಯಚೂರು ತಾಲೂಕಿನ ಶಕ್ತಿನಗರದ ವಿದ್ಯುತ್ ಸ್ಥಾವರದ ಮುಖ್ಯ ದ್ವಾರದ ಬಳಿಯಲ್ಲಿ ರಾಯಚೂರು ಹೈದರಾಬಾದ್ ಮುಖ್ಯ ಹೆದ್ದಾರಿ ಮೇಲೆ ಬೈಕ್ ಸವಾರರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಬೈಕ್ ಸಾವನಪ್ಪಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಸುರೇಶ್ ಎನ್ನುವ 35 ವರ್ಷದ ವ್ಯಕ್ತಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದ ರಿಂದ ಬೈಕ್ ಸವಾರ ಸ್ಥಳದಲ್ಲಿ ಸಾವನಪ್ಪಿದ್ದು, ಶಕ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಲಾರಿ ವಶಕ್ಕೆ ಪಡೆದಿದ್ದಾರೆ. ಘಟನೆಯಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದ ಘಟನೆ ನಡೆಯಿತು.