ಗೌರಿಬಿದನೂರು ನಗರದ ಹೊರವಲಯದಲ್ಲಿರುವ ತಾಲೂಕು ಆಡಳಿತ ಸೌದದ ಸಭಾಂಗಣದಲ್ಲಿ ಎರಡು ತಾಲೂಕುಗಳ ಆಡಳಿತ ವತಿಯಿಂದ, ಗೌರಿ ಗಣೇಶ ಹಬ್ಬದ ಸಿದ್ಧತೆ ಕುರಿತು ಅಧಿಕಾರಿಗಳು ಮತ್ತು ವಿವಿಧ ಕೋಮುಗಳ ಮುಖಂಡರೊಂದಿಗೆ ಶಾಂತಿ ಸಭೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಯಿತು.ಸಭೆಯಲ್ಲಿ ಹಬ್ಬಕ್ಕೆ ಮುಂಚೆ ಪಿ ಒ ಪಿ ಗಣಪತಿ ಗಳನ್ನು ಸಂಪೂರ್ಣ ವಾಗಿ ನಿಷೇದಿಸಲು ಅಧಿಕಾರಿಗಳು ಎಲ್ಲಾ ರೇತಿಯ ಕ್ರಮ ಕೈ ಗೊಳ್ಳಬೇಕು, ತಪ್ಪಿದ್ದಲ್ಲಿ ಅವುಗಳನ್ನು ತೆರವು ಗೊಳಿಸಬೇಕು, ಪರಿಸರ ಸ್ನೇಹಿ ಗಣಪತಿ ಗಳನ್ನು ಮಾತ್ರ ಮಾರಾಟ ಮಾಡಿ ಪ್ರತಿಷ್ಟಾಪನೆ ಮಾಡಬೇಕು. ಯಾವುದೇ ಆಯೋಜಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಇದೆಯಾ ಇಲ್ಲವೇ ಎಂದು ಪರಿಶೀಲನೆ ಮಾಡಿಕೊಂಡು ಅವರಿಗೆ ಅನುಮತಿ ಕೊಡಬೇಕು.