ಕಡಕೋಳ ಗ್ರಾಮದಲ್ಲಿ ವ್ಯಕ್ತಿ ಓರ್ವನ ಮೇಲೆ ಮೊಸಳೆ ದಾಳಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದ ಕೃಷ್ಣ ನದಿಯ ನಡುಗಡ್ಡೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಮೊಸಳೆ ದಾಳಿ ಮಾಡಿರುವ ಘಟನೆ ಜರುಗಿದೆ. ದಾಳಿಗೆ ಒಳಗಾದ ವ್ಯಕ್ತಿಯನ್ನ ಲಕ್ಷ್ಮಣ ದುರ್ಗಪ್ಪ ಮಾಂಗ ಎಂದು ಗುರುತಿಸಲಾಗಿದೆ.ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಬಂದ ಹಿನ್ನೆಲೆಯಲ್ಲಿ ಲಕ್ಷ್ಮಣ ಎನ್ನುವವರು ಎಂದಿನಂತೆ ಬಹಿರ್ದಸೆಗೆ ಹೋಗುವಾಗ ಏಕಾಏಕಿ ಮೊಸಳೆ ದಾಳಿಮಾಡಿದೆ. ಕಾಲಿಗೆ ಗಂಭೀರವಾದ ಗಾಯವಾಗಿದ್ದು, ಅಪಾರ ಪ್ರಮಾದಲ್ಲಿ ರಕ್ತಶ್ರಾವವಾಗಿದೆ. ಕೂಡಲೆ ಸ್ಥಳೀಯ ಗ್ರಾಮಸ್ಥರು ಗಾಯಾಳುವನ್ನ ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.