ಬಡ್ತಿಯಲ್ಲಿ ಬೇಕು ಒಳಮೀಸಲಾತಿ; ಎಚ್.ಆಂಜನೇಯ ಚಿತ್ರದುರ್ಗ:-ಮಾದಿಗರ ಧೀರ್ಘ ಕಾಲದ ಹೋರಾಟದ ಫಲ, ಸಿದ್ದರಾಮಯ್ಯ ಸರ್ಕಾರ ಒಳಮೀಸಲಾತಿ ನೀಡಿರುವುದು ನಮ್ಮೆಲ್ಲರಿಗೂ ತೃಪ್ತಿ ಇದೆ. ಆದರೆ, ಕೆಲ ಗೊಂದಲದ ಮಾತುಗಳು ಸಮಾಜದಲ್ಲಿ ಹರಿದಾಡುತ್ತಿದ್ದು, ಅದಕ್ಕೆ ಅಂತ್ಯ ಹಾಡುವ ಕೆಲಸ ಮಾಡಬೇಕೆಂದು ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹಿಸಿದರು. ನಗರದ ದುರ್ಗದ ಸಿರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.