ಕಲಬುರಗಿ : ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮುನಹಳ್ಳಿ ಗ್ರಾಮದಲ್ಲಿ ವಚನ ಜಾಥಾಕ್ಕೆ ಚಾಲನೆ ನೀಡಲಾಗಿದೆ.. ಸೆಪ್ಟೆಂಬರ್ 1 ರಂದು ಬೆಳಗ್ಗೆ 11.30 ಗಂಟೆಗೆ ಆಳಂದನ ತೋಂಟದಾರ್ಯ ಅನುಭವ ಮಂಟಪದ ಶ್ರೀ ಕೋರಣೇಶ್ವರ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದ್ದಾರೆ.. ಇನ್ನೂ ಈ ವಚನ ಜಾಥಾವು ಗ್ರಾಮದ ತುಂಬೆಲ್ಲ ಸಂಚರಿಸಿದೆ.. ಅಲ್ಲದೇ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಸಹ ವಚನ ಜಾಥಾವು ಸಂಚರಿಸಲಿದೆ.. ಬಸವಾದಿ ಶರಣು ಮಾನವ ಧರ್ಮ ಜಾಗೃತಿಗಾಗಿ ಶ್ರಮೀಸಿದ್ದು, ಅವರ ಆಚಾರ ವಿಚಾರ ಜೀವನದಲ್ಲಿ ಅಳವಡಿಸಿಕೊಂಡು ಮುಂದೆ ಸಾಗಬೇಕೆಂದು ಶ್ರೀಗಳು ಭಕ್ತರಿಗೆ ಸಲಹೆ ನೀಡಿದರು.