ಕಲಬುರಗಿ : ಇತ್ತೀಚಿಗೆ ಎಟಿಎಮ್‌ಗಳಿಗೆ ಭದ್ರತೆ ಇಲ್ಲದ ಕಾರಣ ದರೋಡೆ ಪ್ರಕರಣಗಳು ಹೆಚ್ಚಾಗ್ತಾನೆ ಇವೆ.. ಇದರ ಮಧ್ಯೆ ಕಲಬುರಗಿಯಲ್ಲಿ ಎಟಿಎಮ್‌ಗೆ ಸಿಬ್ಬಂದಿಗಳು ಹಣ ಹಾಕಿದ ಬಳಿಕ ಕೀಯನ್ನ ಎಟಿಎಮ್ ಮಶೀನ್‌ಗೆ ಬಿಟ್ಟು ಹೋದ ಘಟನೆ ಕಲಬುರಗಿ ನಗರದ ತಾಜ್ ನಗರ ಬಡಾವಣೆಯ ಇಂಡಿಯಾ-1 ಎಟಿಮ್‌ನಲ್ಲಿ ಸೆ3 ರಂದು ಮಧ್ಯಾನ 12 ಗಂಟೆಗೆ ನಡೆದಿದೆ.. ಎಟಿಎಮ್‌ಗೆ ಹಣ ಹಾಕಿದ ಬಳಿಕ ಸಿಬ್ಬಂದಿಗಳು ಕೀ ಬಿಟ್ಟು ಹೋಗಿದ್ದು, ಬಳಿಕ ಖಾಸಗಿ ವ್ಯಕ್ತಿ ಎಟಿಮ್‌ನ ಕೀ ತೆಗೆಯಲು ಯತ್ನಿಸುತ್ತಿದ್ದ ವೇಳೆ ಆತನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಚೌಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ