ಸುರಪುರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿರುವ ಸರ್ವೆ ನಂಬರ್ 7/1 ರಲ್ಲಿನ ಕಾರಿಜ್ ಖಾತಾ ಭೂಮಿಯನ್ನು ಮಂಜೂರು ಮಾಡುವಂತೆ ಆಗ್ರಹಿಸಿ ಭಾನುವಾರ ಮಧ್ಯಾನ ಸುರಪುರ ನಗರದ ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಅಂಬೇಡ್ಕರ್ ವೃತ್ತ ಭೂಮಿ ಮಂಜೂರಾತಿ ಹೋರಾಟ ಸಮಿತಿ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಅನೇಕ ಜನ ಮುಖಂಡರು ಭಾಗವಹಿಸಿ ಪ್ರತಿಭಟನೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗಿ ಸರಕಾರ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಯಾದಗಿರಿ ದಲಿತ ಸಂಘಟನೆ ಮುಖಂಡರಾದ ಮರೆಪ್ಪ ಚೆಟ್ಟೆರ್ ಕರ್, ಭೀಮಣ್ಣ ಹೊಸಮನಿ, ಮರಿಯಪ್ಪ ಜಾಲಿಮೆಂಚಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.