ಕಾಡಗೋಡಿ ದಿಣ್ಣೂರಿನಲ್ಲಿ ಸ್ವಯಂ ಕ್ರಮ ಕೈಗೊಂಡು ಬಡ ದಲಿತರ ಮನೆ ಧ್ವಂಸ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಕೇಸ್ ದಾಖಲಿಸಲು ಮುಖ್ಯಮಂತ್ರಿಗೆ ಮನವಿ ಮಾಡಿದ್ದೆ. ಅದನ್ನು ಮುಖ್ಯಮಂತ್ರಿಯವರು ಒಪ್ಪಿಕೊಂಡು ಪೊಲೀಸ್ ಮಹಾನಿರೀಕ್ಷಕರಿಗೆ ಕೇಸ್ ದಾಖಲಿಸಲು ಸೂಚನೆ ನೀಡಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾತನಾಡಿದ ಅವರು, 1952ರಲ್ಲಿ ಕಾಡುಗೋಡಿ ದಿಣ್ಣೂರಿನ 711 ಎಕರೆ ಜಮೀನು ದಲಿತರ ಕುಟುಂಬಕ್ಕೆ ನೀಡಲಾಗಿದೆ. ಇದರಲ್ಲಿ 250 ಎಕರೆ ಕೆಐಡಿಬಿ ಪ್ರತಿ ಎಕರೆಗೆ 30 ಸಾವಿರ ರೂಪಾಯಿ ಪರಿಹಾರ ನೀಡಿ ಭೂಸ್ವಾಧೀನ ಮಾಡಿದೆ.