ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಬುಧವಾರ ಮಧ್ಯಾನ ಜೆಡಿಎಸ್ ನ ತಾಲೂಕ ಹಾಗೂ ನಗರ ಘಟಕಕ್ಕೆ ವಿವಿಧ ಘಟಕಗಳ ಅಧ್ಯಕ್ಷರ ಆಯ್ಕೆ ನಡೆಯಿತು. ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ ದೊರೆ ಅವರ ಶಿಫಾರಸಿನ ಮೇರೆಗೆ ತಾಲೂಕ ಅಲ್ಪಸಂಖ್ಯಾತರ ಘಟಕ ರೈತ ಘಟಕ ನಗರ ಘಟಕ ಹಾಗೂ ಯುವ ಘಟಕಕ್ಕೆ ನೂತನ ಅಧ್ಯಕ್ಷರುಗಳನ್ನ ನೇಮಕಗೊಳಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಈರಣ್ಣ ಮರ್ಲಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.