ದಾಂಡೇಲಿ : ಬಸವೇಶ್ವರ ನಗರದ ಅಂಬಾಭವಾನಿ ದೇವಸ್ಥಾನದ 39ನೇ ವರ್ಷದ ವಾರ್ಷಿಕೋತ್ಸವ ಹಾಗೂ ನವರಾತ್ರಿ ವೈಭವ ಕಾರ್ಯಕ್ರಮವು ಇಂದು ಬುಧವಾರ ಮಧ್ಯಾಹ್ನ 4:00 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ಸೆಪ್ಟೆಂಬರ್ 21ರಿಂದ ಆರಂಭಗೊಂಡ ವಾರ್ಷಿಕೋತ್ಸವ ಕಾರ್ಯಕ್ರದಲ್ಲಿ ಪ್ರತಿದಿನದಂತೆ ಇಂದು ಬುಧವಾರ ಬೆಳಗ್ಗಿನಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಹಾಪೂಜೆ ಯಾದ ಬಳಿಕ ಸವಾಲ್ ಕಾರ್ಯಕ್ರಮ ಜರುಗಿತು. ಮಧ್ಯಾಹ್ನ 12:30 ಗಂಟೆ ನಂತರ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು ಅನ್ನ ಸಂತರ್ಪಣೆಯೂ ಇಂದು ಬುಧವಾರ ಸಂಜೆ ನಾಲ್ಕು ಗಂಟೆಯವರೆಗೂ ಮುಂದುವರೆಯಿತು. ಇಂದು ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ಶ್ರೀದೇವಿಯ ದರ್ಶನವನ್ನು ಪಡೆದರು.